== ಗಂಗಾದೇವಿ/ಮೋಳಿಗೆ ಮಹಾದೇವಿ == ಬಸವಣ್ಣನವರ ನಿರ್ಮಲ ವ್ಯಕ್ತಿತ್ವ ಕೇವಲ ಕರ್ನಾಟಕದ ಜನರನ್ನಷ್ಟೇ ಆಕರ್ಷಿಸಲಿಲ್ಲ. ದೇಶದ ಮೂಲೆ ಮೂಲೆಗಳಿಂದ ಅನೇಕ ಜನರು ಕಲ್ಯಾಣಕ್ಕೆ ಬಂದು ಶರಣದೀಕ್ಷೆ, ಶರಣತ್ವ ಸ್ವೀಕರಿಸಿದರು. ಅಂತಹವರಲ್ಲಿ ಕಾಶ್ಮೀರದ ದೊರೆ ಮಹದೇವರಸ ಮತ್ತು ಆತನ ಪಟ್ಟ ಮಹಿಷಿ ಗಂಗಾದೇವಿ ಪ್ರಮುಖರು. ಇವರು ತಮಗಿದ್ಧ ರಾಜ ವೈಭವವನ್ನು ತೊರೆದು, ಸಾಮಾನ್ಯರಂತೆ ಕಟ್ಟಿಗೆ ಮಾರುವ ಕಾಯಕವನ್ನು ಕೈಗೆತ್ತಿಕೊಂಡು ಬದುಕ ನಡೆಸಿದವರು. ಈ ಸಂದರ್ಭದಲ್ಲಿ ಅವರು ತಮ್ಮ ಮೂಲ ಹೆಸರನ್ನು ಬದಲಾಯಿಸಿ, ಮಹದೇವರಸ ಮೋಳಿಗೆ ಮಾರಯ್ಯನಾದರೆ, ರಾಣಿ ಗಂಗಾದೇವಿ ವೋಳಿಗೆ ಮಹಾದೇವಿಯಾಗುತ್ತಾಳೆ. ಈಕೆಯ ವಚನಗಳ ಅಂಕಿತ- "ನಿ:ಕಳಂಕ ಮಲ್ಲಿಕಾರ್ಜುನಯ್ಯಾ".